ಶಿವಮೊಗ್ಗ: ಮಾಜಿ ಸಿಎಂ, ದಿವಂಗತ ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವೆ ಮತ್ತೆ ಶಿವಮೊಗ್ಗದಲ್ಲಿ ರಾಜಕೀಯ ಗುದ್ದಾಟ ಶುರುವಾಗಿದೆ.ಬಿಜೆಪಿ ಶಾಸಕರಾಗಿರುವ ಕುಮಾರ್ ಬಂಗಾರಪ್ಪ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ದಲಿತ ಆಕಾಶ್ ನಾಯ್ಕ್ ಎಂಬವರ ಮನೆ ಕೆಡವಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಸಹೋದರ ಮಧು ಬಂಗಾರಪ್ಪ ಪ್ರತಿಭಟನೆ ನಡೆಸಿದ್ದಾರೆ.ಆದರೆ ಇದು ಅಕ್ರಮ ಕಟ್ಟಡವಾಗಿದ್ದರಿಂದ ತೆರವುಗೊಳಿಸಿದ್ದೇವೆ ಎಂದು ತಹಶೀಲ್ದಾರ್ ಹೇಳಿದ್ದಾರೆ. ಆದರೆ ಮಧು