ಮದ್ವೆ ಆದರೂ ಲವ್ ಮಾಡಿದ ; ಬ್ರೇಕಪ್ ಮಾಡಿಕೊಂಡ ಹುಡುಗಿಯನ್ನು ಕೊಂದ

ಕೋಲ್ಕತ್ತಾ| Jagadeesh| Last Modified ಭಾನುವಾರ, 21 ಜೂನ್ 2020 (19:58 IST)
ತಾನು ಮದುವೆಯಾಗಿದ್ದರೂ ಆ ವಿಷಯ ಮುಚ್ಚಿಟ್ಟು ಹುಡುಗಿಯೊಂದಿಗೆ ಲವ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪ್ರೇಯಸಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಜಯಂತ ಹಲ್ದಾರ್ ಕೊಲೆ ಮಾಡಿದ ಪಾಗಲ್ ಪ್ರೇಮಿಯಾಗಿದ್ದರೆ, ಪ್ರಿಯಾಂಕಾ (21) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಪ್ರಿಯಾಂಕಾ ಹಾಗೂ ಜಯಂತ್ ಪ್ರೀತಿ  ಮಾಡುತ್ತಿದ್ದರು. ಆದರೆ ಮೊದಲೇ ಬೇರೆ ಮದುವೆಯಾಗಿದ್ದ ಜಯಂತ್ ಆ ವಿಷಯವನ್ನು ಪ್ರಿಯಾಂಕಾಳಿಂದ ಮುಚ್ಚಿಟ್ಟಿದ್ದ.

ಮದುವೆಯಾಗಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಪ್ರಿಯಾಂಕಾ ಬ್ರೇಕಪ್ ಮಾಡಿಕೊಂಡಿದ್ದಳು.

ಪ್ರಿಯಾಂಕಾ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಸಿಟ್ಟಾಗಿದ್ದ ಜಯಂತ್ ನೇರವಾಗಿ ಆಕೆಯ ಮನೆಗೆ ಹೋಗಿ ಗುಂಡು ಹೊಡೆದು ಪರಾರಿಯಾಗಿದ್ದಾನೆ.

ಕೋಲ್ಕತ್ತಾದಲ್ಲಿ ಘಟನೆ ನಡೆದಿದ್ದು, ಕೊಲೆಗಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :