ಇನ್ನೇನು ಮಹದಾಯಿ ರಾಜ್ಯದ ಅಂತಿಮ ತೀರ್ಪು ಹೊರ ಬರುತ್ತದೆ ಎಂಬ ಆಶಾ ಭಾವನೆ ಮೂಡಿರುವಾಗಲೇ ಗೋವಾ ಸರಕಾರ ಮತ್ತೆ ಹೊಸ ಕ್ಯಾತೆ ತೆಗೆದಿದ್ದು, ಕರ್ನಾಟಕದ ವಿರುದ್ಧ ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಅಂತಿಮ ತೀರ್ಪು ತಡೆಯುವ ಹುನ್ನಾರ ನಡೆಸಿದೆ. ಆ ಮೂಲಕ ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.