ಮಹಾದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಬಗ್ಗೆ ಇವತ್ತು ನಡೆದ ಸರ್ಪಪಕ್ಷಗಳ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಹಿರಿಯ ವಕೀಲ ನಾರಿಮನ್ ಜತೆಗೆ ಈ ಸಂಬಂಧ ಅಗಸ್ಟ್ 16ರಂದು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ. ಮಹಾದಾಯಿ ನದಿ ನೀರು ವಿವಾದ ಬಗೆಹರಿಸಲು ನಾವೆಲ್ಲರೂ ಒಂದಾಗಿದ್ದೇವೆ, ಇಂದು ನಡೆದ ಸಭೆಯಲ್ಲಿ ಎಲ್ಲರು ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಯವರಿಗೆ ಅಭಿನಂದನೆ