ಜಿಲ್ಲೆಯ ಗಡಿಗ್ರಾಮ ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಪ್ರಸಿದ್ದ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಜು. 31ರಂದು ಮಹಾಮಸ್ತಕಾಭಿಷೇಕ ಜರುಗಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಜಿ.ಬಿ.ಮಲ್ಲೇಶ್ ತಿಳಿಸಿದ್ದಾರೆ. 60 ಅಡಿ ಎತ್ತರದ ಸೌಮ್ಯ ಸ್ವಭಾವದ ಶ್ರೀ ಚಾಮುಂಡೇಶ್ವರಿ ಲೋಹದ ವಿಗ್ರಹ 2021ರ ಆಗಸ್ಟ್ 8ರಂದು ಉದ್ಘಾಟನೆಗೊಂಡಿತ್ತು. ಜು.29ರಿಂದಲೇ ಲೋಕಕಲ್ಯಾಣಾರ್ಥ ಚಂಡಿಕಾಹೋಮ ಆಯೋಜನೆಗೊಂಡಿದ್ದು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾಗಿಯಾಗಲಿದ್ದಾರೆ. ಜು. 30ರಂದು ಚಾಮುಂಡೇಶ್ವರಿ ದೇವಿಗೆ ಹೂವು- ಹೊಂಬಾಳೆಯಿಂದ ಸಿಂಗರಿಸಿ ಮೆರವಣಿಗೆ ನಡೆಸಲಾಗುವುದು.