ದುರಸ್ಥಿ ಸ್ಥಿತಿಯಲ್ಲಿರುವ ಹಾಗು ತಾಂತ್ರಿಕ ದೋಷದಿಂದ ಕೂಡಿರುವ 1,02,713 ವಿದ್ಯುತ್ ಪರಿವರ್ತಕಗಳ (ಟಿಸಿ)ಗಳ ನಿರ್ವಹಣೆಯನ್ನು ಬೆಸ್ಕಾಂ ಕಳೆದ 7 ತಿಂಗಳಲ್ಲಿ ಮಾಡಿದೆ. ಟಿಸಿ ನಿರ್ವಹಣೆಯನ್ನು ಎಲ್ಲಾ 535 ಸೆಕ್ಷನ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5. 2022 ರಂದು ಚಾಲನೆ ನೀಡಲಾಗಿತ್ತು. ನವೆಂಬರ್24, 2022ರ ವೇಳೆಗೆ 102713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದ್ದು, ಟಿಸಿಗಳ ನಿರ್ವಹಣೆಯಿಂದಾಗಿ