ಮಕರ ಸಂಕ್ರಮಣ ಅಂಗವಾಗಿ ಹುಲಗನ ಮುರುಡಿಗೆ ಅಪಾರ ಭಕ್ತ ಸಾಗರ ಹರಿದು ಬಂದಿತು.ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಲುಗನ ಮುರುಡಿ ವೆಂಕಟರಮಣ ಸ್ವಾಮಿ ಬೆಟ್ಟಕ್ಕೆ ಜನ ಸಾಗರವೇ ಹರಿದುಬಂದಿತು.ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮದ ಜೊತೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.ತಾಲೂಕಿನಲ್ಲಿ ಎಲ್ಲೆಲ್ಲೂ ಹಬ್ಬದ ವಾತಾವರಣ ವಿಜೃಂಭಣೆಯಾಗಿ ಕಂಡು ಬಂದಿತು. ಸುತ್ತಲಿನ ಗ್ರಾಮಸ್ಥರು ಹಬ್ಬದ ಪ್ರಯುಕ್ತ ಹುಲುಗನ ಮುರುಡಿ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು.ತನ್ನದೇ ಆದ ಇತಿಹಾಸವನ್ನು ಹೊಂದಿರುವ ಹುಲುಗನ