ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಪಕೋಡ ಮಾರಾಟ ಮಾಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಠಿ ಮಾಡುತ್ತೇವೆ ಎಂದಿದ್ದರು. ಆದರೆ, ಅದನ್ನು ನಾವು ತಪ್ಪಾಗಿ ತಿಳಿದುಕೊಂಡಿದ್ದೇವೆ. ಮೇಕ್ ಇನ್ ಇಂಡಿಯಾ ಪಕೋಡ ಮಾರುವುದು ಕೂಡ ಆಗಿದೆ ಎಂದಿದ್ದಾರೆ. ಪಕೋಡ ಮಾರಿ ಯುವಕರು ಬದುಕಬೇಕಿದೆ. ಇಲ್ಲವಾದರೆ ಕಳ್ಳತನ ಮಾಡಿ ಬದುಕಬೇಕು. ಇದು ಮೇಕ್