ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗಾಸನ ಮಾಡಿ

ಬೆಂಗಳೂರು, ಸೋಮವಾರ, 29 ಏಪ್ರಿಲ್ 2019 (06:48 IST)

ಬೆಂಗಳೂರು : ಪ್ರತಿದಿನ ಯೋಗ ಮಾಡುವುದರಿಂದ ಉತ್ತಮವಾಗಿರುತ್ತದೆ ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೆ ಇದೆ. ಈ ಯೋಗದಿಂದ ಆರೋಗ್ಯ ಮಾತ್ರವಲ್ಲ ಲೈಂಗಿಕ ಜೀವನವನ್ನು ಕೂಡ ಉತ್ತಮವಾಗಿಸಬಹುದು.

ಹೌದು. ಹಲಾಸನ ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಲದ ಮೇಲೆ ನೇರವಾಗಿ, ಅಂಗಾತವಾಗಿ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ ದಿಕ್ಕಿಗೆ ಚಾಚಬೇಕು. ಇದರಿಂದ ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ ಗ್ರಂಥಿಗಳನ್ನು ಬಲಪಡಿಸಿ, ಸಕ್ರಿಯಗೊಂಡು  ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

ಹಾಗೇ ಉಷ್ಠಾಸನ ಕೂಡ ಲೈಂಗಿಕ ಜೀವನ ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ. ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ನಂತ್ರ ಶರೀರವನ್ನು ಮೇಲೆತ್ತಿ. ಕೈಗಳನ್ನು ಕಾಲಿಗೆ ತಾಗಿಸಿ, ಶರೀರವನ್ನು ನಿಧಾನವಾಗಿ ಹಿಂದಕ್ಕೆ ಚಾಚಬೇಕು. ಇದು  ಜನನಾಂಗದ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಪ್ರತಿದಿನ ಸರಿಯಾದ ವಿಧಾನದಲ್ಲಿ ಈ ಯೋಗಾಭ್ಯಾಸವನ್ನು ಮಾಡಿದರೆ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ರೆಜಿಲ್ ನಲ್ಲಿ ಗಿಣಿಯೊಂದನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?

ಪಿಯಾಯಿ : ಮಾಮಾ ಪೊಲೀಸ್ ಎಂದು ಕೂಗಿಕೊಂಡ ಗಿಣಿಯೊಂದನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಬ್ರೆಜಿಲ್ ನ ...

news

ಊಟ ನೀಡಲು ಬಂದ ಮಗಳ ಮೇಲೆ ತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ

ಗುರುಗ್ರಾಮ : ಊಟ ನೀಡಲು ಬಂದ 13 ವರ್ಷದ ಮಗಳ ಮೇಲೆ ಜನ್ಮ ನೀಡಿದ ತಂದೆಯೇ ಅತ್ಯಾಚಾರ ಎಸಗಿದ ಘಟನೆ ...

news

ಬಾಂಬ್ ಸ್ಫೋಟ: ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಹೈ ಅಲರ್ಟ್

ಪಕ್ಕದ ಶ್ರೀಲಂಕಾದ ಕೊಲಂಬೋನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ...

news

ಬೈ ಎಲೆಕ್ಷನ್ ಪ್ರತಿಷ್ಠೆ: ಗೆಲ್ಲೋಕೆ ಕೈ ಪಡೆ ಮಾಸ್ಟರ್ ಪ್ಲಾನ್

ರಾಜ್ಯದ ಚಿಂಚೋಳಿ, ಕುಂದಗೋಳ ಕ್ಷೇತ್ರಗಳ ಸ್ಪರ್ಧೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಗೆಲ್ಲೋಕೆ ...