ಕಲಬುರಗಿ-ಬೀದರ್ ಜಿಲ್ಲೆಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸುವ 104 ಕಿ.ಮಿ ಉದ್ದದ ಮಹತ್ವದ ರೈಲ್ವೆ ಯೋಜನೆ ಪೂರ್ಣಗೊಂಡಿದ್ದು, ದಿನಾಂಕ 29 ರಂದು ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬೀದರ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಕಲಬುರಗಿ-ಬೀದರ್ ರೈಲು ಯೋಜನೆ ಆಗಿದ್ದರಿಂದ ಕಲಬುರಗಿಯಲ್ಲಿ ಉದ್ಘಾಟನೆ ಹಮ್ಮಿಕೊಳ್ಳುವ ಬದಲಾಗಿ ಬೀದರ್ನಲ್ಲಿ ಹಮ್ಮಿಕೊಂಡಿದ್ದಕ್ಕೆ ಕಲಬುರಗಿ ರಾಜಕೀಯ ನಾಯಕರಲ್ಲಿ ಆಕ್ರೋಶ ಮೂಡಿಸಿದೆ. ರಾಜ್ಯ ಸರಕಾರ ಯೋಜನೆಗೆ ಅರ್ಧದಷ್ಟು ಹಣವನ್ನು ನೀಡಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು