ಮಲ್ಲಿಕಾರ್ಜುನ್ ಖರ್ಗೆ ಹಿಂದುಳಿದವರ ವಿರೋಧಿ: ಪ್ರತಾಪ್ ಸಿಂಹ

ಮೈಸೂರು| Vinod| Last Modified ಶುಕ್ರವಾರ, 30 ಡಿಸೆಂಬರ್ 2016 (12:20 IST)
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹಿಂದುಳಿದವರ ವಿರೋಧಿ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಂಸದ ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬ್ಯಾಂಕಿಂಗ್ ಹಾಗೂ ಆನ್‌ಲೈನ್ ವ್ಯವಹಾರ ಅರಿಯದ ಜನರು ಇದ್ದಾರೆ. ಇದಕ್ಕೆ 54 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಲೇವಡಿ ಮಾಡಿದರು.
2011 ರಲ್ಲಿ ಜರ್ಮನಿ ದೇಶ ಕಪ್ಪು ಹಣ ಹೊಂದಿದ್ದವರ ಪಟ್ಟಿ ತರಿಸಿಕೊಂಡಿತ್ತು. ಆ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಅಧಿಕವಾಗಿತ್ತು. ಆದರೆ, ಈ ಕುರಿತು ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಟ್ಟು ಬಿಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ್, ಇದು ಅನಿರೀಕ್ಷಿತವಾಗಿ ಕಾಂಗ್ರೆಸ್‌ನ ಬುದ್ದಿ ತೋರಿಸುತ್ತದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಹಪಹಪಿಸುತ್ತಿದೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :