ದುಡ್ಡಿನ ಮೇಲೆ ಬಿಜೆಪಿ ಚುನಾವಣೆ ನಡೆಸುತ್ತಿದೆ. ಅಲ್ಲದೇ ಮನಿ ಮತ್ತು ಮಸಲ್ ಪವರ್ ಬಳಸುತ್ತಿದ್ದಾರೆ. ರಾಜ್ಯದ ಬಜೆಟ್ನಲ್ಲಿ 3 ಲಕ್ಷ ಕೋಟಿ ಹಣ ಇದೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಹೋಗುತ್ತದೆ. ಅನೇಕ ಎಂಎಲ್ಎಗಳು ಹಾಗೂ ಅವರ ಸಂಬಂಧಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈಗ ಅವರ ಬಗಲಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಅವರು ಮಾತನಾಡುವುದಿಲ್ಲ. ಒಂಭತ್ತು ವರ್ಷಗಳಲ್ಲಿ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. 40% ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ