ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ದೂರವಾಣಿ ಕರೆ ಮೂಲಕ ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡದಂತೆ ಜೀವಬೆದರಿಕೆ ಹಾಕಲಾಗಿದ್ದು, ಇದು ಹೇಡಿತನದ ಕೆಲಸ. ಕರೆ ಮಾಡಿರುವ ದುಷ್ಕರ್ಮಿಗಳನ್ನು ಬಂಧನ ಮಾಡಬೇಕೆಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಹೇಳಿದ್ದಾರೆ.ಕೇಂದ್ರ ಸರಕಾರವನ್ನು ಎದುರಿಸುವ ದಿಟ್ಟತನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ. ಅವರು ರಾಜ್ಯಸಭೆಗೆ ಬಾರದಂತೆ ಮಾಡಲು ಅನೈತಿಕ ದಾರಿ ತುಳಿಯುವುದರಿಂದ ಸಾಧ್ಯವಿಲ್ಲ