ಸ್ಥಾನಿಕ ವೈದ್ಯರು ಇಂದು ಕರ್ತವ್ಯ ಮಾಡದೇ ಬೀದಿಗೆ ಇಳಿದಿದ್ರು. ಓಪಿಡಿ ಬಂದ್ ಮಾಡಿ ಆಸ್ಪತ್ರೆಯ ಮುಂಭಾಗ ಧರಣಿ ಕುತ್ತಿದ್ರು. ಕೋವಿಡ್ ಅಪಾಯ ಭತ್ಯೆ ಬಿಡುಗಡೆ ಸೇರಿದಂತೆ, ಪಿಜಿ ವಿದ್ಯಾರ್ಥಿಗಳ ಫೀಸ್ ಕಡಿಮೆ ಮಾಡಬೇಕೆಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳ್ಳಿಗೆಯಿಂದ ಮಧ್ಯಾಹ್ನದ ವರೆಗೆ ಪ್ರತಿಭಟನೆ ನಡೆಸಿದ್ರು.ಇನ್ನೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಸೀಟ್ ಪಡೆದವರಿಗೆ ಶುಲ್ಕ ಪರಿಷ್ಕರಣೆಯಿಂದ ತಾರತಮ್ಯವಾಗ್ತಿದೆ. ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮಲ್ಲಿ ಹೆಚ್ಚು ಶುಲ್ಕ ಪಡೆಯಲಾಗ್ತಿದೆ,