ನಡು ರಸ್ತೆಯಲ್ಲಿ ಪತ್ನಿಯನ್ನೇ ಕೊಂದ ಪತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪತ್ನಿ ಹೇಮಾ ಕೊಲೆಯಾಗಿದ್ದರೆ, ಆರೋಪಿ ಮಂಜುನಾಥ್ ಕೊಲೆಮಾಡಿದ ಆರೋಪಿಯಾಗಿದ್ದಾನೆ. ಮಂಜುನಾಥ್ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಇದರಿಂದ ರೋಸಿಹೋಗಿದ್ದ ಹೇಮಾ ಪೊಲೀಸರಿಗೆ ದೂರು ನೀಡಲು ಹೊರಟಿದ್ದಳು. ಆಗ ದಾರಿಯಲ್ಲೇ ಹೇಮಾ ಳನ್ನು ತಡೆದ ಮಂಜುನಾಥ್ ಅವಳನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಬೆಂಗಳೂರಿನ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.