ಹಾಸನ: ತಾನು ಪೊಲೀಸ್ ಪೇದೆ ಎಂದು ಹಣ, ಚಿನ್ನಾಭರಣ ದೋಚಿದ ವ್ಯಕ್ತಿಯನ್ನು ಹೊಳೆನರಸೀಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವಕನೊಬ್ಬ ಬೈಕ್ ಪಾರ್ಕ್ ಮಾಡುತ್ತಿದ್ದಾಗ ತಾನು ಪೊಲೀಸ್ ಎಂದು ಹೇಳಿಕೊಂಡು ಬಳಿಗೆ ಬಂದ ಆರೋಪಿ ಆತನನ್ನು ಪೊಲೀಸ್ ಠಾಣೆಗೆ ವಿಚಾರಣೆ ಮಾಡಬೇಕೆಂದು ಕರೆದೊಯ್ದಿದ್ದಾನೆ. ದಾರಿ ಮಧ್ಯೆ ಆತನಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪಿ ಯುವಕನ ಬಳಿಯಿದ್ದ 16 ಸಾವಿರ ರೂ. ನಗದು ಮತ್ತು ಬೆಲೆ ಬಾಳುವ ಚಿನ್ನದ ಉಂಗುರವನ್ನು ದೋಚಿದ್ದಲ್ಲದೆ, ಆತನ