ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತಿ ಆಕೆಯ ರುಂಡ ಕತ್ತರಿಸಿ ಕೊಂದ ಭೀಕರ ಘಟನೆ ಮೈಸೂರು ಜಿಲ್ಲೆ ವರುಣಾ ಬಳಿಯ ಚೆಟ್ಟನಹಳ್ಳಿಯಲ್ಲಿ ನಡೆದಿದೆ. ನಲವತ್ತು ವರ್ಷದ ಪುಟ್ಟಮ್ಮ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿ ದೇವರಾಜ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದಂಪತಿಗೆ 20 ವರ್ಷದ ಮಗಳಿದ್ದು, ಆಕೆ ಕಾಲೇಜಿಗೆ ಹೋಗಿದ್ದಾಗ ಪತ್ನಿ ಜೊತೆ ಜಗಳ ತೆಗೆದ ದೇವರಾಜ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪದೇಪದೆ ಪತ್ನಿಯ ಶೀಲ ಶಂಕಿಸಿ ಜಗಳ ತೆಗೆಯುತ್ತಿದ್ದ