ಬೆಂಗಳೂರು: ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ರಂಗೋಲಿಯಡಿ ತೂರುವ ಖತರ್ನಾಕ್ ವ್ಯಕ್ತಿಗಳಿರುತ್ತಾರೆ. ಅಂತಹದ್ದೇ ವ್ಯಕ್ತಿಯೊಬ್ಬ ಈಗ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಸುಮಾರು 101 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ರಾಜೇಶ್ ಎಂಬಾತ ಇದೀಗ ಆಡುಗೋಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಹೆಲ್ಮೆಟ್ ಧರಿಸದೇ ಸವಾರಿ, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲದೇ ಸವಾರಿ, ಚಾಲನೆ ವೇಳೆ