ಬೆಂಗಳೂರು : 24 ವರ್ಷದ ಯುವತಿ ಲವ್ ಪ್ರೊಪೊಸಲ್ ಗೆ ಪ್ರತಿಕ್ರಿಯಿಸಲು ಸಮಯಬೇಕು ಎಂದು ಹೇಳಿದ್ದಕ್ಕೆ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದಕ್ಕೆ ಯುವತಿ ಸ್ವಲ್ಪ ಸಮಯಬೇಕು, ಮನೆಯವರನ್ನು ಕೇಳಬೇಕು ಎಂದು ಹೇಳಿದ್ದಾಳೆ. ಇದಕ್ಕೆ ಕೋಪಗೊಂಡ ಯುವಕ ಆಕೆಯ ಕಪಾಳಕ್ಕೆ ಬಾರಿಸಿ ಹಲ್ಲೆ ನಡೆಸಿ ಆಕೆಯ ಫೋನ್ ಮತ್ತು 45ಸಾವಿರ ಹಣವನ್ನು ದೋಚಿದ್ದಾನೆ.ಯುವತಿ ಪೊಲೀಸರಿಗೆ