ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ಕಟ್ಟಡದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭೂಪಸಂದ್ರದ ನಿವಾಸಿ ಉಮರ್ ಫಾರೂಕ್ (19) ಮೃ ತಪಟ್ಟ ಯುವಕ. ಮೃತ ಉಮರ್ ಫಾರೂಕ್, ಸೋಮವಾರ ಸಂಜೆ ಪಾರಿವಾಳ ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದರು. ಪಾರಿವಾಳ ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಮೃತ ಉಮರ್, ಹಲವು ಕಟ್ಟಡಗಳನ್ನು ಏರಿ ಪಾರಿವಾಳ ಹಿಡಿದು ತರುತ್ತಿದ್ದರು.