ಅಪ್ರಾಪ್ತಳ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು, ಗುರುವಾರ, 7 ಡಿಸೆಂಬರ್ 2017 (13:24 IST)

13 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ಕಳೆದ 2014ರ ಅಕ್ಟೋಬರ್ 14 ರಂದು ಬಾಲಕಿ ಉಲ್ಲಾಳ ಮುಖ್ಯರಸ್ತೆಯಲ್ಲಿರುವ ಮುನೇಶ್ವರ್ ನಗರದ 18ನೇ ಕ್ರಾಸ್‌ನಲ್ಲಿ ನಡೆದು ಹೋಗುತ್ತಿರುವ ಸಂದರ್ಭದಲ್ಲಿ ಶರವಣ ಎನ್ನುವ ಆರೋಪಿ. ಬಾಲಕಿಗೆ ಚಾಕೋಲೇಟ್ ಆಮಿಷವೊಡ್ಡಿ ಬೈಕ್‌ನಲ್ಲಿ ಸೆಂಥಿಲ್ ಕುಮಾರ್ ಎನ್ನುವ ಗೆಳೆಯನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು 
 
ಬಾಲಕಿಗೆ ತಿಂಡಿ ಕೊಟ್ಟಿದ್ದಲ್ಲದೇ 20 ರೂಪಾಯಿ ಕೊಟ್ಟು ಘಟನೆಯ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಬಾಲಕಿಯನ್ನು ಅದೇ ರಸ್ತೆಯಲ್ಲಿ ಬಿಟ್ಟು ತೆರಳಿದ್ದ ಎನ್ನಲಾಗಿದೆ.
 
ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆ ಕಂಡು ಪೋಷಕರು ಬಾಲಕಿಯ ವಿಚಾರಣೆ ನಡೆಸಿದಾಗ ನಡೆದ ಘಟನೆ ಬಹಿರಂಗವಾಗಿದೆ. ಕೂಡಲೇ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಜ್ಞಾನಭಾರತಿ ಪೊಲೀಸ್ ಠಾಣೆಯ ಎಸಿಪಿ ಸತ್ಯನಾರಾಯಣ್ ಎಸ್.ಕುಡೂರ್, ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲವ್ ಜಿಹಾದ್: ಮುಸ್ಲಿಂ ವ್ಯಕ್ತಿಯನ್ನು ಕೊಚ್ಚಿ ಸಜೀವವಾಗಿ ದಹಿಸಿದ ಆರೋಪಿ

ರಾಜ್ಸಾಮಂದ್: ಲವ್‌ಜಿಹಾದ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನನ್ನು ...

news

ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಅತ್ಯಾಚಾರ

ತುಮಕೂರು:ಅಪ್ರಾಪ್ತೆಯ ಮೇಲೆ ಐವರು ಸ್ನೇಹಿತರಿಂದ ಗ್ಯಾಂಗ್ ರೇಪ್ ನಡೆದ ಭೀಕರ ಘಟನೆಯೊಂದು ತುಮಕೂರಿನ ಮಹಿಳಾ ...

news

ಮತ್ತೊಬ್ಬ ಸ್ವಾಮೀಜಿ ಕಾಮದಾಟ ಬಯಲು

ಮತ್ತೊಬ್ಬ ಸ್ವಾಮೀಜಿಯ ಕಾಮಪುರಾಣ ಬಯಲಾಗಿದ್ದು, ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಹಲವಾರು ...

news

ಭೀಕರ ಅಪಘಾತ- ಸ್ಥಳದಲ್ಲಿ ಒಂಭತ್ತು ಮಂದಿ ಸಾವು

ತಮಿಳುನಾಡಿನ ತಿರುಚಿರಾಪಳ್ಳಿಯ ತಾವರನ್ ಕುರಚ್ಚಿಯಲ್ಲಿ ನಿಂತಿದ್ದ ಲಾರಿಗೆ ವ್ಯಾನೊಂದು ಡಿಕ್ಕಿ ಹೊಡೆದ ...