20 ವರ್ಷದ ಮಾನಸಿಕ ಅಸ್ವಸ್ಥೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ವಾರಂಗಲ್ ಜಿಲ್ಲೆಯ ಚಾರ್ಬೌಳಿ ಗ್ರಾಮದಲ್ಲಿ ವರದಿಯಾಗಿದೆ. ಪತಿ ವಿಜೇಂದ್ರಾಚಾರಿ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದು. ಮಾನಸಿಕ ಅಸ್ವಸ್ಥಳಾಗಿರುವ ಪುತ್ರಿಯ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬಾಲಕಿ ಇದೀಗ ಗರ್ಭಿಣಿಯಾಗಿರುವುದು ಖಚಿತವಾಗಿದ್ದು ಆರೋಪಿ ತಂದೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಲಕಿಗೆ ಚಿಕಿತ್ಸೆ ನೀಡಿದ ವೈದ್ಯರು ಪೊಲೀಸರಿಗೆ ಕೋರಿದ್ದಾರೆ.