ಚಿತ್ರದುರ್ಗ : ಯುವಕನೊಬ್ಬ ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಉಮೇಶ್ ಪ್ರೀತಿ ನಾಟಕವಾಡಿ ಹಣ ದೋಚಿದ ವ್ಯಕ್ತಿ. ಯುವತಿಯೊಬ್ಬಳನ್ನು ಸ್ನೇಹ ಮಾಡಿಕೊಂಡ ಈತ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ತನ್ನ ಉನ್ನತ ಶಿಕ್ಷಣಕ್ಕೆ ಹಣ ಬೇಕೆಂದು ಆಕೆಯಿಂದ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಆದರೆ ಆತ ಅನೇಕ ಯುವತಿಯರ ಜೊತೆ ಪ್ರೀತಿಯ ನಾಟಕವಾಡಿ ಅನೈತಿಕ ಸಂಬಂಧ ಹೊಂದಿದ್ದ