Widgets Magazine

ಅಪ್ರಾಪ್ತ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ ಕಾಮುಕ

ದಾವಣಗೆರೆ| pavithra| Last Modified ಮಂಗಳವಾರ, 3 ಡಿಸೆಂಬರ್ 2019 (06:55 IST)
ದಾವಣಗೆರೆ : ಮನೆಯಲ್ಲಿ ಒಬ್ಬಳೆ ಆಟವಾಡುತ್ತಿದ್ದ 8 ವರ್ಷದಬಾಲಕಿಯನ್ನು ಕಾಮುಕನೊಬ್ಬ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಎಸಗಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ರಂಜನ್ (23) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದ 2ನೇ ತರಗತಿಯ ಬಾಲಕಿ ಮನೆಯ ಹೊರಗೆ ಒಬ್ಬಳೆ ಆಟವಾಡುತ್ತಿದ್ದಾಗ, ಯಾರು ಇಲ್ಲದನ್ನು ಗಮನಿಸಿದ ರಂಜನ್ ಆಕೆಯನ್ನು ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ವಿಚಾರ ಯಾರಿಗಾದರೂ ಹೇಳಿದರೆ ತಾಯಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾನೆ.


ಆದರೆ ಬಾಲಕಿ ಈ ವಿಚಾರವನ್ನು ತಾಯಿಗೆ ತಿಳಿಸಿದ್ದು, ತಾಯಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :