ಮೈತ್ರಿ ನಾಯಕರ ವಿರುದ್ಧವೇ ತಿರುಗಿ ಬಿದ್ದ ಮಂಡ್ಯ ಕೈ ಕಾರ್ಯಕರ್ತರು

ಮಂಡ್ಯ, ಗುರುವಾರ, 4 ಏಪ್ರಿಲ್ 2019 (16:28 IST)

: ಮಂಡ್ಯ ರಾಜಕೀಯದಲ್ಲಿ ನಡೆಯುತ್ತಿರುವ ಘಟನೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇದೀಗ ಮಂಡ್ಯ ಕೈ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ.


ಹೌದು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ  ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಂಡ್ಯದ ಕೈ ಕಾರ್ಯಕರ್ತರು ಇದೀಗ, ಕಾಂಗ್ರೆಸ್​ನ ಮಾಜಿ ಸಚಿವ ಅಂಬರೀಶ್​ ಅವರ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಆಕೆಗೆ ಬೆಂಬಲ ನೀಡಿ, ಕಾಂಗ್ರೆಸ್​ ಬಾವುಟ ಹಿಡಿದು ಪ್ರಚಾರದಲ್ಲಿ ಸಾಥ್​ ನೀಡುತ್ತಿದ್ದಾರೆ.


ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ, ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್​ ಬಾವುಟ ಹಿಡಿದು ಪ್ರಚಾರ ಮಾಡುವ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಅಂಥವರು ಪಕ್ಷ ಬಿಟ್ಟು ಹೋಗಬಹುದು. ಬೇರೆ ಪಕ್ಷದ ಅಭ್ಯರ್ಥಿ ಜೊತೆಗೆ ನಮ್ಮ ಪಕ್ಷದ ಚಿಹ್ನೆ ಕಾಣಿಸಿಕೊಳ್ಳಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ ಎಂದು ಖಡಕ್​ ಸೂಚನೆ ನೀಡಿದ್ದರು.


ಇದರಿಂದ ರೊಚ್ಚಿಗೆದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದು,ಇಂದು  ಬಹಿರಂಗವಾಗಿಯೇ ಬಾವುಟ ಹಿಡಿದು ಸುಮಾಲತಾ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಕಾಂಗ್ರೆಸ್​ ಪಕ್ಷದ ನಾಯಕರು ಹಾಗೂ ಹೈಕಮಾಂಡ್ ​ಗೂ ತಲೆನೋವಾಗಿ ಪರಿಣಮಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತುಮಕೂರಿನಲ್ಲಿ ನಮ್ಮ ಬೇರು ಕೀಳೋದಿರಲಿ ಪರಮೇಶ್ವರ್ ಬೇರೇ ಕಿತ್ತುಕೊಂಡು ಹೋಗಿದೆ - ಸೋಮಣ್ಣ ವ್ಯಂಗ್ಯ

ತುಮಕೂರು : ನಮ್ಮನ್ನ ಬೇರು ಸಮೇತ ಕಿತ್ತಾಕೋದು ಇರಲಿ ಪರಮೇಶ್ವರ್ ಅವರ ಬೇರೇ ಕಿತ್ತುಕೊಂಡು ಹೋಗಿದೆ ಎಂದು ...

news

ಪ್ರಚಾರಕ್ಕೆ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಗೆ ಚಳಿ ಬಿಡಿಸಿದ ಗ್ರಾಮಸ್ಥರು

ಚಿಕ್ಕಮಗಳೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ...

news

ಸಮೀಕ್ಷೆ ಪ್ರಕಾರ ಅತಿ ಹೆಚ್ಚು ಶಾರೀರಿಕ ಸಂಬಂಧ ಬೆಳೆಸುವವರು ಯಾವ ದೇಶದವರು ಗೊತ್ತಾ?

ಬ್ರಿಟನ್ : ಉಳಿದ ದೇಶಗಳಗೆ ಹೋಲಿಸಿದರೆ ಬ್ರಿಟನ್ ಜನರು ಮದ್ಯಪಾನ ಅಥವಾ ಡ್ರಗ್ಸ್ ಸೇವನೆ ನಂತರ ಹೆಚ್ಚು ...

news

ನನ್ನಲ್ಲಿ ಕೆಲವೇ ಹನಿಗಳಷ್ಟು ವೀರ್ಯಾಣು ಬಿಡುಗಡೆಯಾಗುತ್ತದೆ. ಇದರಿಂದ ಮಗು ಪಡೆಯಬಹುದೇ?

ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನಾನು ಮುಷ್ಠಿಮೈಥುನ ಮಾಡಿಕೊಂಡಾಗ ಕೆಲವೇ ಹನಿಗಳಷ್ಟು ...