ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸುತ್ತಾರೆಂಬ ಸುದ್ದಿ ಹುಟ್ಟಿಕೊಂಡ ಬೆನ್ನಲ್ಲೇ ಮಂಡ್ಯದ ಮಾಜಿ ಸಂಸದೆಗಾಗಿ ರೆಬಲ್ ಸ್ಟಾರ್ ಅಂಬಿ ಮಂಡ್ಯ ಕ್ಷೇತ್ರ ಬಿಟ್ಟುಕೊಡಬೇಕಾಗಬಹುದು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಇಬ್ಬರೂ ಸ್ಟಾರ್ ಗಳಿಗೂ ಕಾಂಗ್ರೆಸ್ ತುಪ್ಪ ಸವರಲು ಮುಂದಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ರಮ್ಯಾಗೆ ದೆಹಲಿ ನಾಯಕರ ಕೃಪಾಕಟಾಕ್ಷವಿದೆ.ಇದೇ ಬಲದಿಂದ ಅವರಿಗೆ ಮಂಡ್ಯ ಟಿಕೆಟ್ ಸಿಗುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು.