ಮಂಗಳೂರಿನಲ್ಲಿ ಕಾರು ಚಾಲಕನ ಬಂಧನ

magaluru| geethanjali| Last Modified ಮಂಗಳವಾರ, 20 ಜುಲೈ 2021 (20:28 IST)
ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಚಾಲಕನನ್ನು ಕುಂಪಲದ ನಿವಾಸಿ ಚರಣ್ ಎಂದು ಗುರುತಿಸಲಾಗಿದೆ. ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಇರ್ಟಿಗಾ ಕಾರನ್ನು ಕೂಡ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ‌. ದೇರಳಕಟ್ಟೆಯಿಂದ ಮಂಗಳೂರಿಗೆ ತುರ್ತಾಗಿ ಬರುತ್ತಿದ್ದ ಆ್ಯಂಬುಲೆನ್ಸ್‌ನ ಸುಗಮ ಸಂಚಾರಕ್ಕೆ ಅಡಚಣೆ ಯಾಗುವ ರೀತಿಯಲ್ಲಿ ಚರಣ್ ತಾನು ಚಲಾಯಿಸುತ್ತಿದ್ದ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ್ದ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದವರು ವೀಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.


ಇದರಲ್ಲಿ ಇನ್ನಷ್ಟು ಓದಿ :