ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ಐಎಂಎ ಸಂಸ್ಥೆಯ ಮನ್ಸೂರ್ ಖಾನ್ 24 ಗಂಟೆಯೊಳಗೆ ಭಾರತಕ್ಕೆ ಬರೋದಾಗಿ ಹೇಳಿಕೊಂಡಿದ್ದಾನೆ.ಭಾರತದ ಪೊಲೀಸರು ರಕ್ಷಣೆ ನೀಡಿದರೆ ಮಾತ್ರ ವಾಪಸ್ ಬರೋದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಅನಾರೋಗ್ಯದ ಕಾರಣದಿಂದ ನಾನು ರೆಸ್ಟ್ ನಲ್ಲಿದ್ದೆ. ಈಗ ಗುಣಮುಖನಾಗಿದ್ದೇನೆ. ಹೀಗಂತ ಮನ್ಸೂರ್ ಖಾನ್ ಹೇಳಿಕೆ ನೀಡಿರೋ ವಿಡಿಯೋ ಬಿಡುಗಡೆ ಮಾಡಿದ್ದಾನೆ.ಭಾರತ ಬಿಟ್ಟು ಬಂದು ತಪ್ಪು ಮಾಡಿದೆ ಎಂದಿರುವ ಆತ, ರಾಜಕಾರಣಿಗಳ ಒತ್ತಡದಿಂದ ದೇಶ ಬಿಡಬೇಕಾಗಿ ಬಂದಿತು ಎಂದಿದ್ದಾನೆ.