ಕಾರವಾರದಲ್ಲಿ ಗಣೇಶೋತ್ಸವಕ್ಕೆ ನಾನಾ ನಿರ್ಬಂಧ ಹೇರಲಾಗಿದೆ. ಗೌರಿ- ಗಣೇಶ ಹಬ್ಬ ಆಚರಣೆಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ಲಾಸ್ಟಿಕ್ ಫ್ಲೆಕ್ಸ್, ಬಲೂನ್ ಮತ್ತಿತರ ವಸ್ತುಗಳನ್ನು ಬಳಸುವಂತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕಗಳನ್ನೂ ಬಳಸುವಂತಿಲ್ಲ. ಈ ಬಗ್ಗೆ ಅನುಮತಿ ನೀಡುವ ಇಲಾಖೆಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೂಚಿಸಿದ್ದಾರೆ. ಗೌರಿ ಹಾಗೂ ಗಣೇಶನ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಕೆರೆ, ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲ ಮೂಲಗಳಿಗೆ