ಮಾರ್ಚ್ 8 ಕ್ಕೆ ‘ಮೈ ಕಂಟ್ರೀ ರನ್’ ಮ್ಯಾರಾಥಾನ್

my country run
ಬೆಂಗಳೂರು| rajesh patil| Last Modified ಗುರುವಾರ, 5 ಮಾರ್ಚ್ 2020 (14:30 IST)
ಮಾರ್ಚ್ 8, ಇಡೀ ವಿಶ್ವವೇ ಮಹಿಳೆಯರ ದಿನಾಚರಣೆಯಲ್ಲಿ ಮಿಂದೇಳುತ್ತಿದ್ದರೇ ಇತ್ತ ದೇಶದ ಹೆಸರುವಾಸಿ ಶಿಕ್ಷಣ ಸಂಸ್ಥೆಯಾದ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ವತಿಯಿಂದ ಮಾರ್ಚ್ 8ಕ್ಕೆ ಇಡೀ ಬೆಂಗಳೂರು ನಿಬ್ಬೆರಗಾಗುವಂತೆ “ಮೈ ಕಂಟ್ರಿ ರನ್-2020” 5ನೇ ಆವೃತ್ತಿಯ ಮ್ಯಾರಾಥಾನ್‍ಗೆ ಅದ್ದೂರಿ ತಯಾರಿ ನಡೆಸಿದೆ. 
ಕಳೆದ ನಾಲ್ಕು ವರ್ಷಗಳಿಂದ ಒಂದಕ್ಕಿಂದ ಒಂದು ಸುಂದರ ಮತ್ತು ಅರ್ಥಪೂರ್ಣ ಮ್ಯಾರಾಥಾನ್‍ಗಳನ್ನು ಅತ್ಯಂತ ಯಶಸ್ವಿಗೊಳಿಸಿದ ಜೈನ ವಿಶ್ವವಿದ್ಯಾಲಯ, ಮಾರ್ಚ 8ರ ಬೆಳಿಗ್ಗೆ 6ಗಂಟೆಗೆ ಹೊಸಕೆರಹಳ್ಳಿಯ ನೈಸ್ ಟೋಲ್ ಪ್ಲಾಜಾದಿಂದ ಆರಂಭವಾಗುವ ‘ಮೈ ಕಂಟ್ರಿ ರನ್’ನ 5ನೇ ಆವೃತ್ತಿಗೆ ನಾಡಿನ ಸಂಸದರು, ಸಚಿವರು, ಸೈನಿಕರು, ಗೌರವಾನ್ವಿತ ಮಹಿಳೆಯರು ಸೇರಿದಂತೆ ನಾಡಿನ ಗಣ್ಯಮಾನ್ಯರು ಚಾಲನೆ ನೀಡಲಿದ್ದಾರೆ.  
my country run
ಈ ಕುರಿತು ಜೈನ್ ಯೂನಿವರ್ಸಿಟಿಯ ಸಂಸ್ಥಾಪಕರಾದ ಡಾ.ಚೆನ್‍ರಾಜ್ ರಾಯ್‍ಚಂದ್  ಕಾರ್ಯಕ್ರಮದ ಪೂರ್ವತಯಾರಿಗೆ ಚಾಲನೆ ನೀಡಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ‘ಮೈ ಕಂಟ್ರಿ ರನ್’  ಮ್ಯಾರಾಥಾನ್ ಈ ಬಾರಿ 15 ಸಾವಿರಕ್ಕೂ ಹೆಚ್ಚು ಜನರು ಈ ಪ್ರತಿಷ್ಟಿತ ಮ್ಯಾರಾಥಾನ್‍ನಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದ್ದು ಈಗಾಗಲೇ www.mycountry.run ವೆಬ್‍ಸೈಟ್‍ಗೆ ಹೋಗಿ ಸಾವಿರಾರು ಜನರು ನೊಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. 
my country run
‘ಫಿಟ್ ಇಂಡಿಯಾ’ ಮತ್ತು ‘ಗೋ ಗ್ರೀನ್’ ಎನ್ನುವ ಆರೋಗ್ಯಕರ ಮತ್ತು ಸಾಮಾಜಿಕ ಸ್ವಾಸ್ಥ್ಯ ವಾಕ್ಯಗಳ ಧ್ಯೇಯ  ಕಾರ್ಯಕ್ರಮ ನಡೆಯುತ್ತಿದ್ದು, ದೇಶಾದ್ಯಂತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ಸು ಗಳಿಸುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು. 
 
‘ಎಲೈಟ್ 10ಕೆ’ ಅಡಿಯಲ್ಲಿ ಕ್ರೀಡಾಳುಗಳು ಮತ್ತು ವೃತ್ತಿಪರ ಓಟಗಾರರು ಪಾಲ್ಗೊಂಡರೆ, ‘ಒಪನ್ 10ಕೆ’  ಪಾಲ್ಗೊಳ್ಳುವ ಇತರರಿಗೆ ಮಿಸಲಾಗಿರುತ್ತದೆ ಎಂದು ತಿಳಿಸಿದರು.
my country run
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೆಜರ್ ಜನರಲ್ ರಾಜ ಪುರೋಹಿತ್ ಮೈ ಕಂಟ್ರಿ ರನ್‍ನ ಬ್ಯಾನರ್ ಬಿಡುಗಡೆ ಮಾಡಿ ಮಾತನಾಡುತ್ತಾ  ದೇಶದ ಪ್ರತಿಯೊಬ್ಬ ಪ್ರಜೆಯೂ ಇಂತಹ ಸಾಮಾಜಿಕ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು, ಹೆಚ್ಚು ಹೆಚ್ಚು ಯುವಕ ಯುವತಿಯವರು ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಡೆಗೆ ಮುಖ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.
 
ಇನ್ನೂ ಜೈನ್ ವಿಶ್ವವಿದ್ಯಾಲಯ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಸೇರಿದಂತೆ ಹೈದ್ರಾಬಾದ್, ಚೆನೈ, ಪುಣಾ, ಬಾಂಬೆ ತ್ರಿವೇಂದ್ರಮ್ ಸೇರಿದಂತೆ ದಕ್ಷಿಣಭಾರತ ಮತ್ತು ಉತ್ತರಭಾರತದ ಸಾವಿರಾರು ಮ್ಯಾರಾಥಾನ್ ಪಟುಗಳು ಮತ್ತು ಆಸಕ್ತರು ಪಾಲ್ಗೊಳ್ಳುವ ನಿರೀಕ್ಷೇ ಇದ್ದು, ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದು ಜೈನ್ ವಿಶ್ವವಿದ್ಯಾಲಯದ ಸಂಘಟಕರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :