ದೇಶದಾದ್ಯಂತ ಕೊರೊನಾ ಲಾಕ್ಡೌನ್ ಮೇ 3 ರವರೆಗೆ ಮುಂದುವರೆದಿದ್ದು, ಈ ನಡುವೆ ಮದುವೆಯಾದ ನವಜೋಡಿಯು ಮಾನವೀಯತೆ ಮೆರೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಸಂದೇಶ್ ಶೆಟ್ಟಿ ಹಾಗೂ ಬೆಳ್ತಂಗಡಿಯ ರಕ್ಷಿತಾ ಅವರ ವಿವಾಹವು ಕಣಂಜಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.ಸರಳ ವಿವಾಹವಾದ ಈ ಜೋಡಿ ತಮ್ಮ ವಿವಾಹದ ಖರ್ಚಿಗೆಂದು ತೆಗೆದಿಟ್ಟಿದ್ದ ಹಣದಿಂದ ಕೊರೊನಾ ಲಾಕ್ಡೌನ್ ನಡುವೆ ಹಸಿದಿರುವ ವಲಸೆ ಕಾರ್ಮಿಕರಿಗೆ, ಅಸಂಘಟಿತ ವಲಯದ ಕೆಲಸಗಾರರಿಗೆ, ರಸ್ತೆ ಬದಿಯ ಅನಾಥರಿಗೆ