ನಿರ್ಮಾಣ ಹಂತದಲ್ಲಿದ್ದ ಬೆಂಗಳೂರಿನ ಮಾರ್ಥಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ್ದು, ಕಾರ್ಮಿಕರಿಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರಿನ ಮಾರ್ಥಸ್ ಆಸ್ಪತ್ರೆ ನವೀಕರಣ ಕಾಮಗಾರಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಬಂದ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಆದರೆ ಕೆಲಸ ಮಾಡುತ್ತಿರುವಾಗ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ಘಟನೆಯಲ್ಲಿ ರಪೀಸಾಬ್, ಬಸವರಾಜು ಇಬ್ಬರು ಕಾರ್ಮಿಕರು ಮೇಲ್ಚಾವಣಿ ಕೆಳಗೆ ಸಿಲುಕಿದ್ದು, ರಾಯಚೂರು