ಮಸೂದ್ ಅಜರ್ ಜಾಗತಿಕ ಉಗ್ರ; ಬಿಜೆಪಿ ಸಂಭ್ರಮ

ಗದಗ, ಗುರುವಾರ, 2 ಮೇ 2019 (19:10 IST)

ಮಸೂದ್ ಅಜರ್ ಜಾಗತಿಕ ಪಟ್ಟಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಚರಣೆ ಮಾಡಿದೆ.

bjp logo" width="600" />
ಗದಗನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಜೈಷ್ ಮೊಹ್ಮದ್ ವಿರುದ್ಧ ಘೋಷಣೆ ಕೂಗಿದರು. ವಿಶ್ವದ ಪಾಲಿಗೆ ಕಂಟಕವಾಗಿದ್ದ ಪಾಕಿಸ್ತಾನದ ಮೂಲದ ಜೈಷ್ ಮೋಹ್ಮದ ಉಗ್ರ ಸಂಘಟನೆ ಮುಖ್ಯಸ್ಥನಾದ ಮಸೂದ್ ಅಜರ್ ವಿರುದ್ಧ ಧಿಕ್ಕಾರ ಕೂಗಿದರು.

ಹೀಗೆ ಉಗ್ರರ ವಿರುದ್ಧ ಕಠಿಣ ನಿರ್ಧಾರಗಳ‌ ಮೂಲಕ ಎಲ್ಲಾ ಉಗ್ರರಿಗೆ ತಕ್ಕಪಾಠ ಕಲಿಸುವಂತೆ ಆಗ್ರಹಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದರು. ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ನೇತೃತ್ವದಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿಷೇಧಿತ ಪ್ರದೇಶದಲ್ಲಿ ಮಠ ನಿರ್ಮಾಣ?

ಪುರಾತತ್ವ ಇಲಾಖೆಯ ಯಡವಟ್ಟಿನಿಂದಾಗಿ ಗುಂಜನರಸಿಂಹಸ್ವಾಮಿಗೆ ಆಪತ್ತು ಎದುರಾಗಿದೆ.

news

ಕಮಲ ಪಾಳೆಯದ ಪ್ರಚಾರ ಜೋರು

ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ತೀವ್ರಗೊಳಿಸಿದೆ.

news

ಜಾಧವ್ ಮಹಾ ಸಿಎಂ ಭೇಟಿ ಮಾಡಿದ್ದು ಏಕೆ?

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿರುವ ಡಾ.ಉಮೇಶ್ ಜಾಧವ್ ನಡೆ ತೀವ್ರ ಕುತೂಹಲಕ್ಕೆ ...

news

ಬೈ ಎಲೆಕ್ಷನ್ ಕೈನಲ್ಲಿ ಬಂಡಾಯ ಅಭ್ಯರ್ಥಿ

ಕುಂದಗೋಳ ಉಪ‌ಚುನಾವಣೆಗೆ ಸಂಬಂಧಿಸಿದಂತೆ ಕೈ ಪಾಳೆಯದಲ್ಲಿ ಬಂಡಾಯ ಭುಗಿಲೆದ್ದಿದೆ.