ಮುಸಲ್ಮಾನರ ಪವಿತ್ರ ಹಬ್ಬ. ಒಂದು ತಿಂಗಳ ಕಾಲ ಉಪವಾಸ ಮಾಡಿ, ಆಚರಿಸೋ ಈ ಹಬ್ಬ, ತ್ಯಾಗ, ಬಲಿದಾನದ ಸಂಕೇತ. ಇಂದು ನಾಡಿನೆಲ್ಲೆಡೆ ಮುಸಲ್ಮಾನ ಭಾಂದವರು ರಂಜಾನ್ ಹಬ್ಬ ಆಚರಿಸಿ ಸಂಭ್ರಮಿಸಿದ್ರು. ಒಂದೆಡೆ ಬಿಳಿ ಬಣ್ಣದ ಬಟ್ಟೆ ಧರಿಸಿ ಸಾಲಾಗಿ ಕುಳಿತ ಜನರು, ಮತ್ತೊಂದೆಡೆ ಹಬ್ಬದ ಖುಷಿಯಲ್ಲಿ ಹೊಸ ಬಟ್ಟೆಗಳನ್ನ ಧರಿಸಿ ಅಪ್ಪನ ತೋಳುಗಳಲ್ಲಿ ನಗುತ್ತಾ ನಮಾಜ್ಗೆ ಆಗಮಿಸಿದ್ದ ಪುಟಾಣಿ ಮಕ್ಕಳು, ಚಾಮರಾಜಪೇಟೆ ಮೈದಾನದಲ್ಲಿ ನಡೆದ ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಕಂಡುಬಂದ