ಮಂಡ್ಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಪಾಳು ಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ದುಷ್ಕರ್ಮಿಗಳು ರಸ್ತೆ ಬದಿಯ 30 ಅಡಿ ಆಳದ ಪಾಳು ಬಾವಿಗೆ ಶಿಶು ಎಸೆದು ಹೋಗಿದ್ದಾರೆ. ಗ್ರಾಮದ ದಾರಿ ಹೋಕರಿಗೆ ಶಿಶು ಆಕ್ರಂದನದ ಸದ್ದು ಕಿವಿಗೆ ಬಿದ್ದಿದೆ. ಈ ವೇಳೆ ಸ್ಥಳೀಯರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು