ದೇಶದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾಗಿದ್ದಾರೆ. ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ, ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾತಾ ಮಾಣಿಕೇಶ್ವರಿ ಅಮ್ಮನವರು ಶನಿವಾರ ರಾತ್ರಿ 8.27 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.ಯಾದಗಿರಿಯ ಯಾನಾಗುಂದಿಯ ಮಾಣಿಕ್ಯಗಿರಿಯಲ್ಲಿ ಸತತ 66 ವರ್ಷಗಳಿಂದ ಧ್ಯಾನಸ್ಥರಾಗಿದ್ದ ಮಾತಾ ಮಾಣೀಕೇಶ್ವರಿ ಅಮ್ಮನವರು ತಮ್ಮ 87ನೇ ವರ್ಷದ ಪಯಣ ಮುಗಿಸಿ ಕಣ್ಮರೆಯಾಗಿದ್ದಾರೆ.ಮಾತಾ ಮಾಣಿಕೇಶ್ವರಿ ಅಮ್ಮನವರು 1933 ರಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಎಂಬ