ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಅಧ್ಯಕ್ಷಾಧಿಕಾರಿಯೆಂದು ನೇಮಿಸಿದೆ.ಸೆಪ್ಟೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ(ಟೌನ್ ಹಾಲಿನಲ್ಲಿ) ಪ್ರಾದೇಶಿಕ ಆಯುಕ್ತರು ಪಾಲಿಕೆಯ ಸಾಮಾನ್ಯ ಸಭೆ ಕರೆದಿದ್ದಾರೆ.ಸರ್ಕಾರದ ಆದೇಶದನ್ವಯ ಪಾಲಿಕೆಯ ಮಹಾಪೌರರ ಸ್ಥಾನವು ಸಾಮಾನ್ಯ(ಮಹಿಳೆ) ಹಾಗೂ ಉಪ ಮಹಾಪೌರರ ಸ್ಥಾನವು ಸಾಮಾನ್ಯ(ಮಹಿಳೆ) ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.