ಎಂ.ಬಿ.ಪಾಟೀಲ್ ಕಾಂಗ್ರೆಸ್ ನ ಗೃಹ ಸಚಿವ!

ಬೆಂಗಳೂರು, ಶನಿವಾರ, 27 ಏಪ್ರಿಲ್ 2019 (15:48 IST)


ರಾಜ್ಯದಲ್ಲಿ ಚುನಾವಣೆ ಸಮಯದಲ್ಲಿ ಕೇಳಿಬರುತ್ತಿದ್ದ ಆರೋಪ ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ.

ಗೃಹ ಸಚಿವರ ನಕಲಿ‌ಪತ್ರ ಪ್ರಕಟಣೆ ಪ್ರಕರಣ ಸಂಬಂಧ ಪತ್ರಕರ್ತ ಹೇಮಂತ್ ಕುಮಾರ್ ಬಂಧನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಮಾಜಿ ಸಚಿವ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ , ವಕ್ತಾರ ಅಶ್ವತ್ ನಾರಾಯಣ ಅವರನ್ನು ಒಳಗೊಂಡ ನಿಯೋಗ ಈ ದೂರು ನೀಡಿದೆ.

ಸುರೇಶ್ ಕುಮಾರ್ ಮಾತನಾಡಿದ್ದು, ರಾಜ್ಯದಲ್ಲಿ ‌ಗೃಹ ಸಚಿವರೇ ಇಲ್ಲ. ಇರುವುದು ಕಾಂಗ್ರೆಸ್ ಗೃಹ ಸಚಿವರು. ಎಂ.ಬಿ.ಪಾಟೀಲರು ಹಿಂದಿನ ಸರ್ಕಾರದಲ್ಲಿ ಇದ್ದಾಗ ಏನು ಮಾಡಿದ್ರು, ಧರ್ಮ‌ ಒಡೆಯುವ ಕೆಲಸ ಹೇಗೆ ಮಾಡಿದ್ರು ಎಂಬುದು ಎಲ್ಲರಿಗೂ ಗೊತ್ತಿದೆ.

ಈಗ ಅವರು ಸೇಡಿನ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ‌ ಸಂಗತಿ ಎಂದರು. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಕೇಂದ್ರದವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಸಿಸ್ ಉಗ್ರರು ರಾಜ್ಯದಲ್ಲಿ ಸಂಚಾರ?

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟದ ಬಳಿಕ ಉಗ್ರರು ನಮ್ಮ ರಾಜ್ಯದಲ್ಲೂ ಓಡಾಡುತ್ತಿದ್ದಾರೆಯೇ ಇಂತಹದ್ದೊಂದು ...

news

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಕೇಸ್: ಸಿಐಡಿ ತನಿಖೆ ಸ್ಪೀಡ್

ಇಂಜನೀಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆ ತೀವ್ರಗೊಂಡಿದೆ.

news

ಐಟಿಯವರು ನನ್ನ ಮನೆಯನ್ನೇ ಶೋಧ ಮಾಡಲಿ ಅಂತ ಮೋದಿ ಹೇಳಿದ್ಯಾಕೆ?

ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದರೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ಹೀಗಾಗಿ ಮೋದಿ ತಪ್ಪು ...

news

ಹನಿಮೂನ್ ಮೇಲೆ ಬಿಜೆಪಿ ವಕ್ರ ಕಣ್ಣು

ರಾಜ್ಯದಲ್ಲಿ ಉಪಚುನಾವಣೆಗಳು ಸಮೀಪಿಸುತ್ತಿರುವಂತೆ ಬಿಜೆಪಿ ಕಣ್ಣು ಹನಿಮೂನ್ , ಪ್ರವಾಸದ ಮೇಲೆ ಬಿದ್ದಿದೆ.