ನನಗೂ ರೌಡಿ ಶೀಟರ್ ಸೈಕಲ್ ರವಿಗೂ ಸಂಬಂಧವಿಲ್ಲ: ಎಂಬಿ ಪಾಟೀಲ್ ಸ್ಪಷ್ಟನೆ

ಬೆಂಗಳೂರು, ಬುಧವಾರ, 18 ಜುಲೈ 2018 (09:50 IST)

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಎಂಬಿ ಪಾಟೀಲ್ ಜತೆಗೆ ಕುಖ್ಯಾತ ರೌಡಿ ಸೈಕಲ್ ರವಿ ದೂರವಾಣಿ ಮೂಲಕ ಸಂಪರ್ಕ ಸಾಧಿಸಿದ್ದನೇ? ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲವೆಬ್ಬಿಸಿದೆ.
 
ಎಂಬಿ ಪಾಟೀಲ್ ರದ್ದು ಎನ್ನಲಾದ 7760977777 ದೂರವಾಣಿ ಸಂಖ್ಯೆಗೆ ರೌಡಿ ಸೈಕಲ್ ರವಿ ಬಳಸಿದ್ದ ಎನ್ನಲಾದ 9741199999 ಮೊಬೈಲ್ ಸಂಖ್ಯೆಯಿಂದ ಹಲವಾರು ಬಾರಿ ದೂರವಾಣಿ ಕರೆ ಹೋಗಿರುವುದು ಪೊಲೀಸ್ ತನಿಖೆಯ ವೇಳೆ ಗೊತ್ತಾಗಿದೆ.
 
ಹೀಗಾಗಿ ಮಾಜಿ ಸಚಿವರಿಗೂ ಕುಖ್ಯಾತ ರೌಡಿಗೂ ಇರುವ ನಂಟಿನ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಇದನ್ನು ಎಂಬಿ ಪಾಟೀಲ್ ನಿರಾಕರಿಸಿದ್ದು, ತನಗೂ ಸೈಕಲ್ ರವಿಗೂ ಯಾವುದೇ ಸಂಬಂಧವಿಲ್ಲ. ಹಾಗಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಸೈಕಲ್ ರವಿಯದ್ದು ಎಂದು ಮಾಧ್ಯಮಗಳು ಹೇಳಿರುವ ಮೊಬೈಲ್ ನಂಬರ್ ಮಂಡ್ಯ ಮೂಲದ ಕಾಂಗ್ರೆಸ್ ಕಾರ್ಯಕರ್ತನದ್ದು. ಅದನ್ನು ರವಿಗೆ ಸೇರಿದ್ದು ಎಂದು ಮಾಧ್ಯಮಗಳು ತಿರುಚುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಪ್ರವಾಸ

ಬೆಂಗಳೂರು: ಶಾಸಕರಾಗಿ ತಮಗೆ ಮರು ಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ...

news

ಸೋನಿಯಾ ಗಾಂಧಿಯನ್ನು ‘ವಿದೇಶಿ’ ಎಂದಿದ್ದಕ್ಕೆ ತನ್ನ ಪಕ್ಷದ ನಾಯಕನಿಗೆ ಮಾಯಾವತಿ ನೀಡಿದ ಶಿಕ್ಷೆಯೇನು ಗೊತ್ತಾ?!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಬಿಜೆಪಿ ವಿರುದ್ಧ ಹೋರಾಡಲು ಮುಂದಾಗಿರುವ ಮಾಯಾವತಿ ...

news

ನಮ್ಮದು ಮುಸ್ಲಿಮರ ಪಕ್ಷ ಎಂದರೇ? ರಾಹುಲ್ ಗಾಂಧಿ ಸ್ಪಷ್ಟನೆ ಕೊಟ್ಟಿದ್ದು ಹೀಗೆ!

ನವದೆಹಲಿ: ನಮ್ಮದು ಮುಸ್ಲಿಮರ ಪಕ್ಷ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆನ್ನಲಾದ ಹೇಳಿಕೆ ...

news

ಬ್ಯೂಟಿ ಕ್ವೀನ್ ಮಾಡಿದ್ದಕ್ಕೆ ತನಗೆ ಬೇಕಾದವರಿಗೆ ಲೈಂಗಿಕ ಸುಖ ನೀಡು ಎಂದಳಂತೆ!

ನವದೆಹಲಿ: ಬಣ್ಣದ ಲೋಕದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಹಲವು ಬಾರಿ ಓದಿದ್ದೇವೆ. ಇಂತಹದ್ದಕ್ಕೆ ...