ಸಿಎಂ ಗಾದಿಗೆ ಎಂಬಿಪಿ, ಡಿಕೆಶಿ ಹಾವು – ಮುಂಗುಸಿಯಂತೆ ಕಿತ್ತಾಟ?

ಹುಬ್ಬಳ್ಳಿ, ಬುಧವಾರ, 15 ಮೇ 2019 (15:42 IST)

ಸಿಎಂ ಆಗಲು ಎಂ.ಬಿ. ಪಾಟೀಲ ಮತ್ತು ಹಾವು‌ ಮುಂಗುಸಿ‌ ತರಹ ಕಚ್ಚಾಡುತ್ತಿದ್ದಾರೆ. ಹೀಗಂತ ಬಿಜೆಪಿ ಶಾಸಕ ದೂರಿದ್ದಾರೆ.

ಇಬ್ಬರೂ ಸಹ ಸಿಎಂ ಆಗಲು ಕುಂದಗೋಳ, ಚಿಂಚೊಳಿ ಕ್ಷೇತ್ರದ ಮೇಲೆ ಬಂಡವಾಳ ಹೂಡಿದ್ದಾರೆ. ಒಂದೊಂದು ಜಿಪಂಗೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿ ಮಾಡಿದ್ದಾರೆ. ಮಂತ್ರಿ ಸ್ಥಾನ ಉಳಿಯಬೇಕಾದರೆ ಖರ್ಚು ಮಾಡಿ ಅಂತಾ ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ‌ ಬಿಜೆಪಿ‌ ಮುಖಂಡ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ದೂರಿದ್ರು.

ಜೀವನದಲ್ಲಿ ಏನಾದರೂ ಮಾಡಿ ಸಿಎಂ ಆಗಬೇಕು ಅಂತಾ ಡಿಕೆಶಿ‌ ಜಿದ್ದಿಗೆ ಬಿದ್ದಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಡಿಕೆಶಿ ಐವತ್ತು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು. ಡಿಕೆಶಿಗೆ ಜಲ ಸಂಪನ್ಮೂಲ‌ ಬದಲಿಗೆ ಭ್ರಷ್ಟ ಸಂಪನ್ಮೂಲ‌ ಸಚಿವ ಅಂತಾ ಹೆಸರಿಡಬೇಕು. ಮಾನ ಮರ್ಯಾದೆ ಗೌರವ ಎಲ್ಲ ಬಿಟ್ಟು ‌ನಿಂತಿದ್ದಾರೆ.

ರಾಮನಗರದಲ್ಲಿ ಓರ್ವ ಶಾಸಕನನ್ನು ಗೆಲ್ಲಿಸಲು ಆಗಿಲ್ಲ. ಇಲ್ಲಿ‌ ಬಂದು ಕುಂದಗೋಳದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಆಟ ಕುಂದಗೋಳದಲ್ಲಿ ನಡೆಯುವುದಿಲ್ಲ ಎಂದು ಟೀಕೆ ಮಾಡಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಡ್ಡಿ ವ್ಯವಹಾರಕ್ಕೆ ರೌಡಿಗಳಿಂದ ಮಾರ್ಕೆಟ್ ನಲ್ಲಿ ಬಿತ್ತು ಹೆಣ

ಬಡ್ಡಿ ವ್ಯವಹಾರಕ್ಕೆ ರೌಡಿಗಳಿಂದ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ನಡೆದಿದೆ.

news

ಉಮೇಶ್ ಜಾಧವ್ 50 ಕೋಟಿಗೆ ಡೀಲ್?: ಬಿಜೆಪಿ ಸಂಸದೆ ಬಾಯ್ಬಿಟ್ಟರು ಸ್ಫೋಟಕ ಸತ್ಯ!

ರಾಜ್ಯದಲ್ಲಿ ಕಾಂಗ್ರೆಸ್ ನವರ ಕೊಡುಗೆ ಶೂನ್ಯವಾಗಿದೆ. ಕಾಂಗ್ರೆಸ್ ನವರಿಗೆ ಮತಕೇಳುವ ಯಾವುದೇ ನೈತಿಕತೆ ...

news

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌: ಬೆಂಗಳೂರು ರೈನೋಸ್‌ ಶುಭಾರಂಭ

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ...

news

ಸರಕಾರ ನಡೆಸಲು ಬಿಜೆಪಿ ಬಿಡ್ತಿಲ್ಲ ಎಂದ ಕಾಂಗ್ರೆಸ್

ರಾಜ್ಯದಲ್ಲಿ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರುವ ಪಕ್ಷಗಳ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ...