ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿವೆ. ಹಲವು ಗ್ರಾಮಗಳು ಜಲಾವೃತಗೊಂಡಿವೆ. ಹೀಗಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರು ಭೇಟಿ ನೀಡುತ್ತಿದ್ದಾರೆ.ರಾಜ್ಯದಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಅಪಾರ ನಷ್ಟ ಉಂಟಾಗಿದೆ. ಜನ ತತ್ತರಿಸಿದ್ದಾರೆ. ನೆರೆ ಭೀತಿ ಹಲವರನ್ನು ಕಂಗಾಲಾಗಿದೆ. ಏತನ್ಮಧ್ಯೆ, ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರಾದ ಆರ್.ವಿ.ದೇಶಪಾಂಡೆ, ಜಿ.ಟಿ.ದೇವೇಗೌಡ ಮತ್ತಿತರರು ಭೇಟಿ ನೀಡುತ್ತಿದ್ದಾರೆ.ಹವಾಮಾನ ವೈಪರೀತ್ಯ ಪರಿಹಾರ ಕಾರ್ಯಕ್ಕೆ ಅಲ್ಲಲ್ಲಿ ಅಡ್ಡಿಯನ್ನುಂಟು ಮಾಡುತ್ತಿದೆ. ರಾಜ್ಯದಲ್ಲಿ