ಬೆಂಗಳೂರು : 35 ವರ್ಷದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ 23 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆದರೆ ನೆರೆಮನೆಯ ಮೂವರು ವ್ಯಕ್ತಿಗಳು ಈ ಬಗ್ಗೆ ತಿಳಿದುಕೊಂಡು ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ತಿಳಿದುಕೊಂಡ ಸಂತ್ರಸ್ತನ ಸಹೋದರಿ ಹಣವನ್ನು ನೀಡಿದ್ದಾಳೆ. ಆದರೆ ಅವರು ಪದೇ ಪದೇ ಹಣದ ಬೇಡಿಕೆ ಇಡುತ್ತಿದ್ದ ಹಿನ್ನಲೆಯಲ್ಲಿ