ಸಹದ್ಯೋಗಿಯ ಪತ್ನಿಯ ಮೇಲೆ ಮಾನಭಂಗ ಎಸಗಿದ ನೌಕಾಪಡೆಯ ಸಿಬ್ಬಂದಿ

ಮುಂಬೈ| pavithra| Last Modified ಭಾನುವಾರ, 23 ಮೇ 2021 (09:37 IST)
ಮುಂಬೈ : ನೌಕಾಪಡೆಯ ಸಿಬ್ಬಂದಿಯ ಪತ್ನಿಯನ್ನು ಆತನ  ಸಹದ್ಯೋಗಿ ಮಾನಭಂಗ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.
ಸಂತ್ರಸ್ತೆಯ ಪತಿ ಹಾಗೂ ಆತನ ಅವಿವಾಹಿತ ಸ್ನೇಹಿತ ಕಳೆದ ವರ್ಷ ಬಾಡಿಗೆ ಅಪಾರ್ಟ್ಮೆಂಟ್ ಅನ್ನು ತೆಗೆದುಕೊಂಡಿದ್ದಾರೆ. ಸಂತ್ರಸ್ತೆಯ ಪತಿ ತರಭೇತಿ ಪಡೆಯಲು ಕೇರಳಕ್ಕೆ ಹೋಗಿದ್ದಾಗ  ಆರೋಪಿ ಆತನ ಪತ್ನಿಗೆ ಮತ್ತು ಬರುವ ಪಾನೀಯ ಮತ್ತು ಸ್ವೀಟ್ಸ್ ನೀಡಿದ್ದಾನೆ. ಆಕೆ ತಲೆನೋವಿನಿಂದ ಮಲಗಿದ್ದಾಗ ತಲೆಗೆ ಮಸಾಜ್ ಮಾಡುವ ನೆಪದಲ್ಲಿ ರೂಂಗೆ ಬಂದ ಆತ  ಅವಳ ಮೇಲೆ ಮಾನಭಂಗ ಎಸಗಿದ್ದಾನೆ. ಹಾಗೇ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.> > ಆದರೆ ಮಹಿಳೆ ಈ ಬಗ್ಗೆ ತನ್ನ ಪತಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :