ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ಆಚರಣೆ ನಡೆಯುತ್ತಿರುವಾಗಲೇ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದೆ. ಬೆಳಗಾವಿಯಲ್ಲಿ ಕನ್ನಡಿಗರು, ಕನ್ನಡ ಪರ ಸಂಘಟನೆಗಳ ಸದಸ್ಯರು ಅದ್ಧೂರಿಯಾಗಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ.ಈ ನಡುವೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಚಿಕ್ಕ ಚಿಕ್ಕ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಗಳನ್ನು ಕೊಟ್ಟು ಕೇಂದ್ರ, ರಾಜ್ಯ ಸರಕಾರ ವಿರುದ್ಧ ಪುಂಡಾಟ ಮೆರೆದಿದೆ.ಅಲ್ಲದೇ, ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಕ್ಕೆ ಕರೆ ನೀಡಿದೆ.