ಮೆಟ್ರೋ ಎರಡನೇ ಹಂತದ ಕಾಮಗಾರಿ 2025ಕ್ಕೆ ಪೂರ್ಣಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ 2024ರೊಳಗೆ ಕಷ್ಟ ಆದರೂ ಸರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೂ ವಿಸ್ತರಣೆಗೊಂಡ 7.5 ಕಿ.ಮೀ. ದೂರದ ಸಂಚಾರವನ್ನು ಉದ್ಭಾಟಿಸಿದ ನಂತರ ಅವರು ಮಾತನಾಡಿದರು. ಇಂದು ಉದ್ಘಾಟನೆ ಮಾಡಿರುವ ಮೆಟ್ರೋ ಮಾರ್ಗ ಪ್ರಮುಖ ಭಾಗವಾಗಿದ್ದು, ಎಲ್ಲಿ ಜಾಗ ಸಿಗಲಿದೆ ಅಲ್ಲಿ ಮೆಟ್ರೋ ಮಾಡಬೇಕು. ಈ ಏಳುವರೆ ಕಿ.ಮೀ