ಬೆಂಗಳೂರು: ಕೊರೋನಾ ಎರಡನೇ ಅಲೆ ಭೀಕರವಾಗಿದೆ. ಅದರಲ್ಲೂ ಮಹಾನಗರಗಳಾದ ಮುಂಬೈ, ಬೆಂಗಳೂರಿನಲ್ಲಿ ವ್ಯಾಪಕವಾಗಿದೆ.ಈ ಹಿನ್ನಲೆಯಲ್ಲಿ ಹಲವು ವಲಸೆ ಕಾರ್ಮಿಕರು ಮಹಾನಗರಗಳಿಂದ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಈ ಮಹಾನಗರಗಳಿಗೆ ಹೆಚ್ಚಾಗಿ ಉತ್ತರಪ್ರದೇಶ, ಬಿಹಾರಗಳಿಂದ ಕೂಲಿಗಾಗಿ ಬರುತ್ತಾರೆ. ಆದರೆ ಈಗ ಕೊರೋನಾ ಭಯ ಇವರೆಲ್ಲರನ್ನೂ ಮರಳಿ ಊರಿಗೆ ತೆರಳುವಂತೆ ಮಾಡಿದೆ.ಈ ಮಹಾನಗರಗಳಲ್ಲಿ ಕ್ವಾರಂಟೈನ್ ವ್ಯವಸ್ಥೆಯ ಕೊರತೆ, ದುಬಾರಿ ವೈದ್ಯಕೀಯ ವೆಚ್ಚ ಕಾರ್ಮಿಕರಿಂದ ಭರಿಸಲಾಗುತ್ತಿಲ್ಲ. ಅಲ್ಲದೆ ಕೊರೋನಾದಿಂದಾಗಿ ಕೆಲಸವೂ ಕಡಿಮೆ, ವೇತನವೂ ಕನಿಷ್ಠ ಮಟ್ಟಕ್ಕಿಳಿದಿದೆ.