ಛಬ್ಬಿ ಗಣೇಶ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದು ಹೆಸರು ವಾಸಿಯಾಗಿದ್ದಾನೆ. ಹೀಗಾಗಿ ತನ್ನದೇ ವಿಶಿಷ್ಟ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ.ಹುಬ್ಬಳ್ಳಿಯ ಛಬ್ಬಿಯ ಕೆಂಪು ಗಣಪತಿ ಎಂದೇ ಪ್ರಸಿದ್ಧ ಪಡೆದಿರುವ ಗಣಪತಿಗೆ ತನ್ನದೇ ಇತಿಹಾಸ, ಮಹತ್ವ ಪಡೆದಿದ್ದಾನೆ. ಗ್ರಾಮದ ಕುಲಕರ್ಣಿ ಮನೆತನದವರ ಮನೆಯಲ್ಲಿ ಗಣಪತಿ ಪ್ರತಿಷ್ಠಾನೆ ಮಾಡುತ್ತಾರೆ. ಇಲ್ಲಿ ಮೊದಲು ಗ್ರಾಮದ ಮೂರೇ ಕುಲಕರ್ಣಿ ಮನೆತನದಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದ್ರೆ ಈಗ ಅದು 9 ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.