ವಿದ್ಯಾರ್ಥಿನಿಯರ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಬಲ್ಲ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಇಂದು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು,ಮೈಸೂರು ಮಹಾರಾಜರು ಸೃಷ್ಟಿಸಿದ ವೈಭವೋಪೇತ ಇತಿಹಾಸವು ಈ ಮೂಲಕ ಮರುಕಳಿಸಿದೆ. ಇದಕ್ಕೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಚಾರಿತ್ರಿಕವಾಗಿದೆ...ಎನ್ಇಪಿಯಲ್ಲಿ ವಿದ್ಯಾರ್ಥಿಗಳ ಸಮಗ್ರ ಕಲಿಕೆಗೆ ಒತ್ತು ಕೊಟ್ಟಿದೆ. ಬ್ರಿಟಿಷರ ಕಾಲದಲ್ಲಿ ಕೇವಲ ಕಂಟೋನ್ಮೆಂಟ್ ಆಗಿದ್ದ ಬೆಂಗಳೂರು ನಗರವು