Widgets Magazine

ಈಗ ಕನ್ನಡ ಚಿತ್ರರಂಗದಲ್ಲಿ ಇಂತಹ ಸಂಸ್ಕೃತಿ ಬಂದಿದೆ ಎಂದ ಸಚಿವ ಬಿ.ಸಿ.ಪಾಟೀಲ್

ಕಲಬುರಗಿ| pavithra| Last Modified ಬುಧವಾರ, 16 ಸೆಪ್ಟಂಬರ್ 2020 (11:25 IST)
ಕಲಬುರಗಿ : ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣದ ಕುರಿತು ಮಾತನಾಡಿದ  ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಚಿತ್ರರಂಗದಲ್ಲಿ ಈ ಹಿಂದೆ ಯಾರೂ ಡ್ರಗ್ಸ್ ಸೇವನೆ ಮಾಡ್ತಿರಲಿಲ್ಲ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಿತ್ರರಂಗದಲ್ಲಿದ್ದಾಗ  ಕ್ಯಾಮರಾಗೆ ನಮಸ್ಕಾರ ಮಾಡ್ತಿದ್ದೆವು. ಈಗ ಕನ್ನಡ ಚಿತ್ರರಂಗದಲ್ಲಿ ಹಾಯ್ ಬಾಯ್ ಸಂಸ್ಕೃತಿ ಬಂದಿದೆ. ಡ್ರಗ್ಸ್ ಎಲ್ಲಾ ರಂಗದಲ್ಲೂ ಇದೆ. ಚಿತ್ರರಂಗ ಬೇಗ ಎದ್ದು ಕಾಣುತ್ತೆ. ಗಾಜಿನ ಮನೆಯಲ್ಲಿರುವವರ ಮೇಲೆ ಎಲ್ಲರ ಕಣ್ಣು ಇರುತ್ತದೆ. ಡ್ರಗ್ಸ್ ಸೇವಿಸುವ ಕಲಾವಿದರನ್ನ ಫಾಲೋ ಮಾಡಿದರೆ ಮಾರಕ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :