ಗದಗ: ಇಲ್ಲಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.ರಂಭಾಪುರಿ ಶ್ರೀಗಳ ಧರ್ಮಸಮ್ಮೇಳನಲ್ಲಿ ಪಾಲ್ಗೊಂಡ ಸಚಿವ ಡಿಕೆ ಶಿವಕುಮಾರ್ ಧರ್ಮದ ವಿಚಾರದಲ್ಲಿ ನಮ್ಮ ಹಿಂದಿನ ಸರ್ಕಾರ ಕೈ ಹಾಕಿ ತಪ್ಪು ಮಾಡಿತು ಎಂದು ಕ್ಷಮೆ ಯಾಚಿಸಿದ್ದಾರೆ.ರಾಜಕೀಯದವರು ಎಂದಿಗೂ ಧರ್ಮದ ವಿಚಾರಕ್ಕೆ ತಲೆಹಾಕಬಾರದು. ಆದರೆ ನಮ್ಮ ಹಿಂದಿನ ಸರ್ಕಾರ ಆ ತಪ್ಪು ಮಾಡಿತು. ಆ ಸರ್ಕಾರದಲ್ಲಿ ನಾನೂ ಸಚಿವನಾಗಿದ್ದೆ. ಧರ್ಮದ ವಿಚಾರದಲ್ಲಿ ಕೈ